ಅಸ್ಕೋಟ್ ಕಸ್ತೂರಿಮೃಗ ಧಾಮ ಭಾರತದ ಉತ್ತರಾಖಂಡ ರಾಜ್ಯದ ಪಿಥೋರಾಗಢ್‌ ಜಿಲ್ಲೆಯಲ್ಲಿ ಆಸ್ಕೋಟ್ ಗ್ರಾಮದ ಬಳಿ ಇದೆ. ಸಮುದ್ರಮಟ್ಟದಿಂದ ೫೪೧೨ ಅಡಿ ಎತ್ತರದಲ್ಲಿ ರಚಿಸಲಾಗಿರುವ ಅಸ್ಕೋಟ್ ಕಸ್ತೂರಿಮೃಗ ಧಾಮದ ಮೂಲ ಗುರಿ ಅಳಿವಿನತ್ತ ಸಾಗಿರುವ ಕಸ್ತೂರಿ ಮೃಗ ಮತ್ತು ಅದರ ನೆಲೆಯನ್ನು ಉಳಿಸಿಕೊಳ್ಳುವುದಾಗಿದೆ. ಈ ಅತಿ ಅಪರೂಪದ ಜೀವಿಯನ್ನು ಸಂರಕ್ಷಿಸುವಲ್ಲಿ ಅವಿರತ ಮತ್ತು ಗಂಭೀರ ಪ್ರಯತ್ನಗಳು ಸಾಗಿವೆ. ಅಸ್ಕೋಟ್ ಕಸ್ತೂರಿಮೃಗ ಧಾಮದಲ್ಲಿ ಉಳಿದಂತೆ ಚಿರತೆ, ಕಾಡುಬೆಕ್ಕು, ಪುನುಗುಬೆಕ್ಕು, ಬೊಗಳುವ ಜಿಂಕೆ ಮೊದಲಾದ ಪ್ರಾಣಿಗಳು ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ನೆಲೆಸುವ ಪಕ್ಷಿಪ್ರಬೇಧಗಳನ್ನು ಸಹ ಕಾಣಬಹುದಾಗಿದೆ. == ಇದನ್ನೂ ನೋಡಿ == ಕಸ್ತೂರಿ ಮೃಗ == ಬಾಹ್ಯ ಸಂಪರ್ಕಗಳು == ಅಸ್ಕೋಟ್ ಕಸ್ತೂರಿಮೃಗ ಧಾಮದ ಅಧಿಕೃತ ಅಂತರಜಾಲ ಮಾಹಿತಿತಾಣ 2016-08-03 ವೇಬ್ಯಾಕ್ ಮೆಷಿನ್ ನಲ್ಲಿ.